ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಜ್ಞಾನ ಯಜ್ಞ ತಾಳಮದ್ದಲೆ ಸಪ್ತಾಹ ಸಮಾರೋಪ : ಗೋವಿಂದರಾಯರಿಗೆ ‘ಕಲಾ ತಪಸ್ವಿ’ ಪ್ರಶಸ್ತಿ

ಲೇಖಕರು : ಪ್ರಜಾವಾಣಿ
ಗುರುವಾರ, ಡಿಸೆ೦ಬರ್ 3 , 2015
ಡಿಸೆ೦ಬರ್ 3, 2015

ಯಕ್ಷಗಾನ ಜ್ಞಾನ ಯಜ್ಞ ತಾಳಮದ್ದಲೆ ಸಪ್ತಾಹ ಸಮಾರೋಪ : ಗೋವಿಂದರಾಯರಿಗೆ ‘ಕಲಾ ತಪಸ್ವಿ’ ಪ್ರಶಸ್ತಿ

ಕುಂದಾಪುರ (ಬೈಂದೂರು) : ಆಧುನಿಕತೆಯ ಪರ್ವದಲ್ಲಿ ಉಂಟಾಗಿರುವ ಪ್ರವಾಹದ ನಡುವೆ ಪಾರಂಪರಿಕ ಕಲಾ ಸಾಹಿತ್ಯ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಜ್ಞಾನಕ್ಕೆ ಮೂಲವಾದ ಯಕ್ಷಗಾನ ತಾಳಮದ್ದಲೆ ಆಯೋಜಿಸುವ ಮೂಲಕ ಕಲಾ ವ್ಯವಸಾಯ ಮಾಡುತ್ತಿರುವ ಜ್ಞಾನ ಯಜ್ಞದ ಸಪ್ತಾಹ ಸ್ಮರಣೀಯವಾದುದು ಎಂದು ಆನಗಳ್ಳಿ ಚನ್ನಕೇಶವ ಭಟ್ ಹೇಳಿದರು.

ದಿ. ಆರ್ಗೋಡು ಗೋವಿಂದರಾಯ ಶೆಣೈ
ಬೈಂದೂರು ಸಮೀಪದ ನಾಗೂರು ಒಡೆಯರ ಮಠ ಶ್ರೀಗೋಪಾಲಕೃಷ್ಣ ಕಲಾ ಮಂದಿರದ ಮದ್ದಲೆಗಾರ ದಿ.ದುಗ್ಗಪ್ಪ ಗುಡಿಗಾರ ಸ್ಮರಣಾ ವೇದಿಕೆಯಲ್ಲಿ ಭಾನುವಾರ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಕಿರಿಮಂಜೇಶ್ವರ ಇವರು ಪ್ರಸ್ತುತ ಪಡಿಸಿದ ಯಕ್ಷಗಾನ ಜ್ಞಾನ ಯಜ್ಞ ತಾಳ ಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅರ್ಥಧಾರಿ ಡಾ. ಎಂ ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನದ ತಾಳಮದ್ದಲೆಗೆ ಮೊದಲಿನಿಂದಲೂ ಅದರದ್ದೇ ಆದ ಪ್ರೇಕ್ಷಕರ ಸಮುದಾಯ ವಿದೆ. ಇತ್ತೀಚಿನ ತಂತ್ರಜ್ಞಾನ ಯುಗದ ಬದಲಾವಣೆಗಳು ಕೆಲವು ರಂಗ ಕಲೆಯ ಮೇಲೆ ವ್ಯತಿರಿಕ್ತ ಪ್ರಭಾವನ್ನು ಬೀರಿದ್ದರೂ, ಇದರ ಬಾಧೆ ಈ ಕಲೆಯ ಮೇಲೆ ಬಿದ್ದಿಲ್ಲ ಎನ್ನುವುದು ಸಂತಸದ ವಿಚಾರ. ಯುವಜನರು ಕೂಡಾ ತಾಳಮದ್ದಲೆ ರಸದೌತಣವನ್ನು ಸವಿಯಲು ಆಸಕ್ತಿಯನ್ನು ತೋರುತ್ತಿರುವ ಬೆಳೆವಣಿಗೆಗಳು ಇರುವುದು ಕಲೆ ಹಾಗೂ ಕಲಾವಿದರು ಜನಮನ್ನಣೆಗಳಿಸಲು ಸಹಕಾರಿಯಾಗುತ್ತದೆ ಎಂದರು.

ಅರ್ಥಧಾರಿ ಉಜಿರೆ ಅಶೋಕ ಭಟ್ ಮಾತನಾಡಿ, ತಮ್ಮ ಜೀವಿತದ ಬಹುಪಾಲನ್ನು ಯಕ್ಷ ಕಲಾ ಸೇವೆಗೆ ಮುಡಿಪಾಗಿಟ್ಟ ಯಕ್ಷರಂಗದ ಯುಗ ಪುರುಷ ತೆಕ್ಕೆಟ್ಟೆ ಆನಂದ ಮಾಸ್ತರ್ ಅವರ ವ್ಯಕ್ತಿತ್ವವನ್ನು ಸ್ಮರಣೀಯವಾಗಿ ಡಲು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡು ತ್ತಿರುವುದು ಅರ್ಥಪೂರ್ಣ ಎಂದರು.

ದಿ. ಆರ್ಗೋಡು ಗೋವಿಂದರಾಯ ಶೆಣೈ ಅವರಿಗೆ ಮರಣೋತ್ತರವಾಗಿ ನೀಡಿದ ತೆಕ್ಕೆಟ್ಟೆ ಆನಂದ ಮಾಸ್ತರ್ ಸ್ಮರಣೆಯ ‘ಕಲಾ ತಪಸ್ವಿ–2015’ ಪ್ರಶಸ್ತಿಯನ್ನು ಪುತ್ರ ಆರ್ಗೋಡು ಮೋಹನದಾಸ್ ಶೆಣೈ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮದ್ದಲೆಗಾರ ದಿ. ದುಗ್ಗಪ್ಪ ಗುಡಿಗಾರ ಅವರ ಪತ್ನಿ ಶಾರದಾ ಗುಡಿಗಾರ್ ಹಾಗೂ ಪುತ್ರಿ ಉಮಾ ಚಂದ್ರಕಾಂತ್ ಕಿಣಿ ಅವರನ್ನು ಗೌರವಿಸಲಾಯಿತು.

ಖಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ಸಂಸ್ಥಾಪಕ ಕೆ. ಎಸ್. ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ ಪ್ರಭಾಕರ ಜೋಶಿ, ಭಾಗವತ ಶಂಕರ್ ಪೈ ನೇರಳಕಟ್ಟೆ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ, ಸುನಂದಾ ಆನಂದ ಮಾಸ್ತರ್‌ ಇದ್ದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ್ ಸ್ವಾಗತಿಸಿದರು. ಗೋವಿಂದ ಎಂ. ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸುಮೋ, ಆರ್ಗೋಡು ಮೋಹನದಾಸ್ ಶೆಣೈ ಇವರ ಅರ್ಥ ಗಾರಿಕೆಯಲ್ಲಿ ‘ಅತಿಕಾಯ’ ತಾಳಮದ್ದಲೆ ಪ್ರದರ್ಶನಗೊಂಡಿತು. ರಾಘವೇಂದ್ರ ಮಯ್ಯ, ಗಜಾನನ ಭಂಡಾರಿ, ಕಾರ್ತಿಕೇಯ ಧಾರೇಶ್ವರ್ ಹಿಮ್ಮೇಳದಲ್ಲಿ ಸಹಕರಿಸಿದ್ದರು.

ಕೃಪೆ : prajavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ